ಆದಿ ಲಕ್ಷ್ಮಿ ಪುರಾಣವು 2019 ರ ಕನ್ನಡ ರೋಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದ್ದು ವಿ. ಪ್ರಿಯಾ ಬರೆದು ನಿರ್ದೇಶಿಸಿದ್ದಾರೆ ಮತ್ತು ರಾಕ್‌ಲೈನ್ ವೆಂಕಟೇಶ್ ಅವರ ಬ್ಯಾನರ್ ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ನಿರ್ಮಿಸಿದ್ದಾರೆ. ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ನಟಿಸಿರುವ ಈ ಚಿತ್ರವು ಡ್ರಗ್ಸ್ ದಂಧೆಯ ಹಿನ್ನೆಲೆಯ ಕಥೆ ಹೊಂದಿದ್ದು, ತನಿಖಾ ಅಧಿಕಾರಿ ಆದಿತ್ಯ (ನಿರೂಪ್ ಭಂಡಾರಿ ಅಭಿನಯ) ಮತ್ತು ಟ್ರಾವೆಲ್ ಏಜೆನ್ಸಿಯ ಲಕ್ಷ್ಮಿ (ರಾಧಿಕಾ ಪಂಡಿತ್ ಅಭಿನಯ) ಇವರುಗಳ ಆಕಸ್ಮಿಕ ಭೇಟಿಯ ಕಥೆಯಾಗಿದೆ. ಚಿತ್ರವು 19 ಜುಲೈ 2019 ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾಯಿತು ಮತ್ತು ಈಗ ಇದು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಲಭ್ಯವಿದೆ. == ಪಾತ್ರವರ್ಗ == ಆದಿತ್ಯನಾಗಿ ನಿರೂಪ್ ಭಂಡಾರಿ ಲಕ್ಷ್ಮಿಯಾಗಿ ರಾಧಿಕಾ ಪಂಡಿತ್ ಶಾಂತಮ್ಮನಾಗಿ ತಾರಾ ರಾಮೇಗೌಡನಾಗಿ ಸುಚೇಂದ್ರ ಪ್ರಸಾದ್ ಈಶ್ವರ್ ಆಗಿ ಯಶವಂತ್ ಶೆಟ್ಟಿ ರವಿ ಪಾತ್ರದಲ್ಲಿ ಭರತ್ ಕಲ್ಯಾಣ್ ಸವಿತಾ ಪಾತ್ರದಲ್ಲಿ ಸೌಮ್ಯಾ ಜಗನ್ಮೂರ್ತಿ ಜೋ ಸೈಮನ್ ವಿಶಾಲ್ ನಾಯರ್ ಚಡ್ಡಾ ಪಾತ್ರದಲ್ಲಿ ಕೃಷ್ಣ ನಾಡಿಗ್ ದೀಪಕ್ ಶೆಟ್ಟಿ ನವಾಬ್ ಶಾ ಮಾಘು ಹೆಗಡೆ == ಬಿಡುಗಡೆ == ಚಿತ್ರವು 19 ಜುಲೈ 2019 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. == ಹಿನ್ನೆಲೆಸಂಗೀತ == ಅನೂಪ್ ಭಂಡಾರಿ ಅವರು ಈ ಚಿತ್ರಕ್ಕೆ ಗೀತೆಗಳನ್ನು ಬರೆದುದಲ್ಲದೆ ಸಂಗೀತವನ್ನೂ ಸಂಯೋಜಿಸಿದ್ದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==